January 1, 2011

ನೀರಾ ರಾಡಿಯಲ್ಲಿ ಪೇಜಾವರ

ದಿನಬೆಳಗಾದರೆ ''ಕೃಷ್ಣ-ಕೃಷ್ಣ'' ಎಂದು ಮಂತ್ರ ಪಠಿಸುವ ಬ್ರಾಹ್ಮಣ ಮಠಾಧೀಶ  ಒಂದು ಕಡೆ!
ಇನ್ನು ಕೆಲವೇ ದಿನಗಳಲ್ಲಿ ಕೃಷ್ಣ ಜನ್ಮಸ್ಥಾನ ಸೇರಲಿರುವ ಕಾಪರ್ೊರೇಟ್ ಕಳ್ಳಿ ಇನ್ನೊಂದೆಡೆ!!
ಪೇಜಾವರ ಸ್ವಾಮಿ ಹಾಗೂ ನೀರಾ ರಾಡಿಯಾಗೆ ಸಂಬಂಧಿಸಿದ ವಿಚಾರ ಇದು. ಕೋಟ್ಯಂತರ ರೂಪಾಯಿ ಕಳ್ಳಹಣ ತಣ್ಣಗೆ ಕೈ ಬದಲಾಗಿರುವ ಹಗರಣವಿದು. ದೈತ್ಯ ಸುಂದರಿ ಕಾಪರ್ೊರೇಟ್ ದಲ್ಲಾಳಿ ನೀರಾ ರಾಡಿಯಾಳ ಸಹವಾಸ ಮಾಡಿದ ತಪ್ಪಿಗೆ ಅನೇಕರು ತಲೆದಂಡ ತೆರುತ್ತಿದ್ದಾರೆ.
ಟೆಲಿಕಾಂ ಮಂತ್ರಿ ಎ.ರಾಜಾ ರಾಜೀನಾಮೆ ನೀಡಿ ಮನೆಗೆ ಹೋದ. ಅವನ ಬೆನ್ನ ಹಿಂದೆಯೇ ತನಿಖಾ ತಂಡಗಳು ರಾಜಾ ಮನೆಗೆ ನುಗ್ಗಿ ದಾಳಿ ಮಾಡಿದ್ದಾರೆ. ಇದೇ ನೀರಾಳನ್ನಿಟ್ಟುಕೊಂಡು ಬ್ಯುಸಿನೆಸ್ ಡೀಲ್ ಕುದುರಿಸುತ್ತಿದ್ದ ರತನ್ ಟಾಟಾನ ಮಯರ್ಾದೆಯೂ ಈಗ ಹರಾಜಾಗುತ್ತಿದೆ. ಸ್ವತಃ ದೇಶದ ಪ್ರಧಾನಿಯೇ ಸಂಸತ್ನ  ಲೆಕ್ಕಪತ್ರ ಸಮಿತಿಯೆದುರು ವಿಚಾರಣೆಗಾಗಿ ಬಂದು ನಿಲ್ಲಬೇಕಾಗಿ ಬಂದಿದೆ.
ಇಂತಹ ಅತಿರಥ ಮಹಾರಥರ ಹಗರಣ- ವಂಚನೆಗಳ ಗದ್ದಲದಲ್ಲಿ ಈಗ ಪೇಜಾವರ ಸ್ವಾಮಿಯ ಹೆಸರನ್ನು ಕಾಣಿಸಬೇಕಿದೆ.
ದೈವಾಂಶ ಸಂಭೂತ, ಅಪ್ಪಟ ಪ್ರಾಮಾಣಿಕ, ಧರ್ಮಗುರು ಎಂದೆಲ್ಲಾ ಹೇಳಿಕೊಳ್ಳುವ ಪೇಜಾವರ ಸ್ವಾಮಿಯು ಈ ಕಾಪರ್ೊರೇಟ್ ಕಳ್ಳಿ ನೀರಾ ರಾಡಿಯಾ ಜೊತೆ ಲಿಂಕ್ ಇರಿಸಿಕೊಂಡಿದ್ದಾರೆ. ಇವರಿಬ್ಬರ ನಡುವೆ ಕೋಟ್ಯಂತರ ರೂಪಾಯಿಗಳು ಕೈಬದಲಾಗಿವೆ.
ಜಂಟಿ ಉದ್ಯಮಗಳು, ಟ್ರಸ್ಟ್ಗಳೂ ಅಸ್ತಿತ್ವಕ್ಕೆ ಬಂದಿವೆ. ಹುಡುಕುತ್ತಾ ಹೋದರೆ ದೆಹಲಿಯಿಂದ ಶುರುಮಾಡಿ ಶಿವಮೊಗ್ಗ -ಸಿದ್ದಾಪುರದವರೆಗೂ ನೀರಾ -ಪೇಜಾವರರ ವ್ಯವಹಾರಗಳು ಕಾಣಿಸುತ್ತಿವೆ. ನಮಗಂತೂ ಆಶ್ಚರ್ಯವಾಗಿದೆ. ಎಲ್ಲಿಯ ನೀರಾ  ರಾಡಿಯಾ? ಎಲ್ಲಿಯ ಪೇಜಾವರರು...!?
ಎಂತೆಂತಾ ದೈತ್ಯರನ್ನೇ ಟಿಶ್ಯೂ ಪೇಪರ್ನಂತೆ ಬಳಸಿ ಬಿಸಾಡಿರುವ ನೀರಾ ಪೇಜಾವರರನ್ನು ಬೆನ್ನ ಹಿಂದೆ ಕೂರಿಸಿಕೊಂಡು ಕೂಸುಮರಿ ಮಾಡುವಂತೆ ಎಲ್ಲಿಗೆ ಕರೆದೊಯ್ದಳು? ಅಸಲಿಗೆ ಇವರಿಬ್ಬರ ಮಧ್ಯೆ ದುಡ್ಡು, ವ್ಯವಹಾರ, ಭಕ್ತಿ ಇತ್ಯಾದಿಗಳ ಗೀವ್ ಅಂಡ್ ಟೇಕ್ ಯಾವಾಗಿನಿಂದ ಶುರುವಾಯಿತೆಂಬುದನ್ನೂ ನೋಡಲೇಬೇಕಾಗಿ ಬಂದಿದೆ.
 
ಇವರದ್ದು ರಾಮ ವಿಠಲ ಟ್ರಸ್ಟ್ - ಅವಳದ್ದು ಸುದೇಶ್ ಟ್ರಸ್ಟ್

ತನ್ನ ಕಣ್ಣಿಗೆ ಕಾಣಿಸುವುದನ್ನೆಲ್ಲ ಆಪೋಷನ ತೆಗೆದುಕೊಳ್ಳುವವಳಂತೆ ಕಾಣುವ ಸುಂದರಿ ನೀರಾ ಭಯಂಕರ ಚಾಲಾಕಿ ಹೆಂಗಸು. ಅವಳ ಸೈಜಿನ ಹೆಂಗಸರು ಸಾಮಾನ್ಯವಾಗಿ ಇಂಡಿಯಾ ದೇಶದಲ್ಲಿ ಕಾಣಸಿಗುವುದಿಲ್ಲ. ಈ ಮಹತ್ವಾಕಾಂಕ್ಷಿ ಹೆಣ್ಣು ಕೇವಲ 20 ವರ್ಷಗಳ ಹಿಂದೆ ಒಬ್ಬ ಮಾಮೂಲಿ ಟ್ರಾವೆಲ್ ಏಜೆಂಟ್ ಜಣಕ ರಾಡಿಯಾ ಎಂಬುವನ ಹೆಂಡತಿಯಾಗಿದ್ದಳು. ಆದರಿವತ್ತು ಅದೇ ನೀರಾ 500 ಕೋಟಿಗೆ ತೂಗುತ್ತಿದ್ದಾಳೆ. ಇವಳ ಬ್ಯುಸಿನೆಸ್ ದಲ್ಲಾಳಿ ಕೆಲಸದ ಸಂಪರ್ಕಗಳ ಬಗ್ಗೆ, ದೊಡ್ಡ ದೊಡ್ಡ ಜನರೊಂದಿಗಿನ ಖಾಸಗಿ ಸಂಬಂಧಗಳ ಬಗ್ಗೆ ರಾಶಿರಾಶಿ ಮಾಹಿತಿಗಳು ಹೊರಬೀಳುತ್ತಿವೆ.
ಈ ಕಸದ ರಾಶಿಯಲ್ಲೇ ಪೇಜಾವರರ ಮುಖವೂ ಕಾಣಿಸುತ್ತಿದೆ.
ನೀರಾ ರಾಡಿಯಾ ಎಂಬ ಮೆಗಾ ಸೀರಿಯಲ್ಲಿನ ಹೊಸ ಎಪಿಸೋಡು ಇದು.
ಎಲ್ಲಾ ಕಾಪರ್ೊರೇಟ್ ಖದೀಮರೂ ಮಾಡುವಂತೆ ನೀರಾ ಕೂಡಾ ಸಮಾಜ ಸೇವೆ ಮಾಡುತ್ತಾಳೆ. 2001ರಲ್ಲಿ ಸುನಾಮಿ ದುರಂತ ನಡೆದಾಗ ಈ ನೀರಾ ತನ್ನ ದಿವಂಗತ ತಾಯಿಯ ನೆನಪಲ್ಲಿ ಅವರ ಹೆಸರನ್ನು ಹೊಂದಿರುವ ಸುದೇಶ್ ಟ್ರಸ್ಟ್ ಅನ್ನು ಸ್ಥಾಪಿಸಿದಳು. ಬಡವರಿಗೆ ಅಕ್ಕಿ, ಬಟ್ಟೆ, ಔಷಧಿ ಹಂಚಿ ಫೋಟೋ ತೆಗೆಸಿಕೊಂಡು ಸಾಕಷ್ಟು ಪ್ರಚಾರವನ್ನೂ ಪಡೆದಳು. ಮುಗ್ಧ ಜನ ಈ ತರದ ಸೇವೆಯನ್ನು ಮಾಡುವವರು ತಮ್ಮ ಸ್ವಂತದ ಹಣ ಖಚರ್ು ಮಾಡಿರುತ್ತಾರೆಂದು ನಂಬಿರುತ್ತಾರೆ. ಆದರೆ ವಾಸ್ತವ ಬೇರೆಯೇ ಇರುತ್ತದೆ. ಖಾಸಗಿ ಉದ್ಯಮಿಗಳ ವಾಷರ್ಿಕ ವಹಿವಾಟಿನ ಆಧಾರದ ಮೇಲೆ ಅವರು ಪ್ರತಿವರ್ಷ ಇಂತಿಷ್ಟೆಂದು ಆದಾಯ ತೆರಿಗೆ ಕೊಡಬೇಕಿರುತ್ತದೆ. ಬೇಕಿದ್ದರೆ ಅಂತಹ ತೆರಿಗೆಯ ಒಂದಂಶವನ್ನು ಸಮಾಜ ಸೇವೆಗೋ ಶಿಕ್ಷಣದ ಹೆಸರಿನ ಟ್ರಸ್ಟ್ಗಳಿಗೋ ದಾನ ಎಂದು ನೀಡಿದರೆ ಒಂದಷ್ಟು ತೆರಿಗೆ ವಿನಾಯತಿ ಸಿಗುವಂತಿರುತ್ತದೆ. ನೀರಾ ತರದ ಕಾಪರ್ೊರೇಟ್ ದಲ್ಲಾಳಿಗಳಿಗೆ ದೊಡ್ಡ ದೊಡ್ಡ ಕಂಪೆನಿಗಳಿಂದ  ಹಲವು ಕೋಟಿ ರೂ. ದೇಣಿಗೆ ಪಡೆಯುವುದು ಕಷ್ಟವೇನಲ್ಲ. ಜೊತೆಗೆ ಅವಳದ್ದೇ ಸ್ವಂತದ ಕಂಪೆನಿಗಳಿಗೆ ನೂರಾರು ಕೋಟಿ ರೂಪಾಯಿಗಳ ಅಕ್ರಮ ಹಣ ಹರಿದುಬರುತ್ತಿತ್ತು.
ನೀರಾಳ ಸುದೇಶ್ ಟ್ರಸ್ಟ್ ಇದೇ ಕೆಲಸ ಮಾಡುತ್ತಿದೆ. ಈ ಟ್ರಸ್ಟಿನಲ್ಲಿ ನೀರಾ, ಅವಳ ಸೋದರಿ ಕರುಣಾ, ರಾಹುಲ್ ಸಿಂಗ್ ಹಾಗೂ ರಾಜೀವ ಮೋಹನ್ ಎಂಬುವರು ಟ್ರಸ್ಟಿಗಳಾಗಿದ್ದಾರೆ.
ಪೇಜಾವರ ಸ್ವಾಮಿ ಇದರ ಗೌರವ ಪೋಷಕ!
ಇದು ಪೇಜಾವರರ-ನೀರಾಳ ಲಿಂಕ್ನ ಒಂದು ಮುಖ.
ಮತ್ತೊಂದೆಡೆ ಪೇಜಾವರ ಸ್ವಾಮಿ ಶ್ರೀರಾಮ ವಿಠಲ ಟ್ರಸ್ಟ್ ಎಂಬ ಹೆಸರಿನ ಟ್ರಸ್ಟ್ ಒಂದನ್ನು ಮಾಡಿಕೊಂಡಿದ್ದಾರೆ.
''ಈ ನೀರಾ ರಾಡಿಯಾಳನ್ನು ನನ್ನ ಭಕ್ತರೊಬ್ಬರು ನನಗೇ ಪರಿಚಯಿಸಿದರು. ಆದರೆ ನಾನು ಆಕೆಯನ್ನು ಅನಂತ್ಕುಮಾರ್ ಎಂಬುವವರಿಗೆ ಪರಿಚಯಿಸಲಿಲ್ಲ" ಎಂದು ಪೇಜಾವರರು ಈಗ ಹೇಳುತ್ತಿದ್ದಾರೆ.
ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿರುವ ಭೂಮಿಯು
ರಾಮವಿಠಲ ಶಿಕ್ಷಣ ಸೇವಾ ಸಮಿತಿಗೆ ಸೇರಿದ್ದೆಂದು, ಈ ಸಮಿತಿಯ ಅಧ್ಯಕ್ಷ ತಾನೆಂದು, ಇದಕ್ಕೆ ಭೂಮಿಯನ್ನು ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹರಾವ್ ಮತ್ತು ದೇವೇಗೌಡ ನೀಡಿದ್ದಾರೆಂದು, ಈ ಸಮಿತಿಗೂ ನೀರಾಗೂ ಯಾವುದೇ ಸಂಬಂಧವಿಲ್ಲ ಎಂದು ಪೇಜಾವರರು ಸ್ಪಷ್ಟೀಕರಣ ನೀಡಿದ್ದಾರೆ.
ಇದು ನಿಜವೇ ಇರಬಹುದು. ಆದರೆ ನೀರಾ ಸ್ಥಾಪಿಸಿರುವ ಸುದೇಶ್ ಟ್ರಸ್ಟ್ನೊಂದಿಗೆ ಪೇಜಾವರರು ಕಳ್ಳುಬಳ್ಳಿ ಸಂಬಂಧ ಹೊಂದಿರುವುದು ನಿಜವಲ್ಲವೇ?

ಕೃಷ್ಣ ಮಂದಿರ ಕಟ್ಟಲು - ಕಳ್ಳಿಯ ದುಡ್ಡು

ದೆಹಲಿಯಲ್ಲಿ  ಪೇಜಾವರರು ಇತ್ತೀಚೆಗೆ ಒಂದು ಕೃಷ್ಣ ಮಂದಿರ ಕಟ್ಟಿಸಿದ್ದಾರೆ. ವಾಜಪೇಯಿ ಪ್ರಧಾನ ಮಂತ್ರಿಯಾಗಿದ್ದಾಗ ಈ ಜಾಗವನ್ನು ಡೆಲ್ಲಿ ಡೆವಲಪ್ಮೆಂಟ್ ಅಥಾರಿಟಿಯಿಂದ ಪೇಜಾವರರು ಮಂಜೂರು ಮಾಡಿಸಿಕೊಂಡಿದ್ದರು. ಈ ಜಾಗದಲ್ಲಿ ಈ ಪೇಜಾವರ ಬೃಹತ್ತಾದ  ಶ್ರೀಕೃಷ್ಣ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಪೇಜಾವರರು ಈ ಕೃಷ್ಣ ದೇವಸ್ಥಾನ ನಿಮರ್ಾಣಕ್ಕೆ ಕಳ್ಳಿ ನೀರಾಳಿಂದ ಭಾರಿ ಮೊತ್ತದ ಹಣ ಪಡೆದಿದ್ದಾರೆ. ಅಷ್ಟು ಹಣ ನೀರಾಳಿಗೆ ಎಲ್ಲಿಂದ ಬಂತು ಎಂದು ಹುಡುಕಿದರೆ ಅದು 2ಜಿ ಸ್ಟ್ರೆಕ್ಟಂ ಹಗರಣವೋ, ಖಾಸಗಿ ವಿಮಾನ ಕಂಪೆನಿಗಳ ಡೀಲಿನ ಅಕ್ರಮ ಹಣವೋ ಆಗಿರಲು ಸಾಧ್ಯ.
ಈ ನೀರಾ ಎಂತಹ ಖತರ್ನಾಕ್ ವಂಚಕಿ ಎಂದು ಕಳೆದ ಎರಡು-ಮೂರು ತಿಂಗಳುಗಳಿಂದ ಮೀಡಿಯಾಗಳು ವರದಿ ಮಾಡುತ್ತಿವೆ. ನೀರಾ ಒಬ್ಬ 'ಹಣಕಾಸು ಭಯೋತ್ಪಾದಕಿ' ಎಂತಲೂ ಕೆಲವರು ಆಕೆಯನ್ನು ಬಣ್ಣಿಸುತ್ತಿದ್ದಾರೆ.
ಇವೆಲ್ಲಾ ರಾಡಿಯಾಗಿ ಗದ್ದಲವಾದಾಗಲೂ ಪೇಜಾವರರಿಗೆ ಮಾತ್ರ ನೀರಾ ಬಗ್ಗೆ ಇದ್ದ ವಿಶೇಷ ಆಸಕ್ತಿ ಕಡಿಮೆಯಾಗಲಿಲ್ಲ. ಹಾಗಾಗಿ ಕಳೆದ ನವೆಂಬರ್ 19ರಂದು ಕೃಷ್ಣ ದೇವಸ್ಥಾನದ ಉದ್ಘಾಟನೆಯನ್ನು ಪೇಜಾವರರು ನೆರವೇರಿಸಿದ್ದಾರೆ.  ವಿಶೇಷ ಏನೆಂದರೆ ನವೆಂಬರ್ 19 ನೀರಾಳ ಬತರ್್ಡೇ ಆಗಿದೆ.
 
ವೇದಿಕ್ ಕಾಲೇಜ್ ಜಂಟಿ ದಂಧೆ
ಈ ನೀರಾ ಹಾಗೂ ಪೇಜಾವರರು ಸೇರಿಕೊಂಡು ಸುದೇಶ್ ಹಾಗೂ ರಾಮ ವಿಠಲ ಟ್ರಸ್ಟ್ ಹೆಸರಲ್ಲೇ ದೆಹಲಿಯಲ್ಲಿ ವೇದಿಕ್ ಸ್ಟಡೀಸ್ ಟ್ರಸ್ಟ್ ಎನ್ನುವ ಹೊಸ ಅಂಗಡಿ ತೆರೆದಿದ್ದಾರೆ. VISVESA (Virtual University for Vedic Studies and Research) ಎಂಬ ಹೆಸರಿನ ಇದು ಒಂದು ವೇದಾಧ್ಯಯನದ ಕಾಲೇಜು. ಈ ಕಾಲೇಜಿನ ಹೆಸರಲ್ಲೇ 'ವಿಶ್ವೇಷ' ಇದೆ. ಬೆನ್ನ ಹಿಂದೆ ನೀರಾ ಎಂಬ ರಾಡಿಯೂ ಇದೆ.
ಕರ್ನಾಟಕದಲ್ಲೂ ಜಂಟಿ ಬ್ಯುಸಿನೆಸ್
ನೀರಾಳ ಸುದೇಶ್ ಫೌಂಡೇಷನ್ನ ಶಾಖಾ ಕಚೇರಿಗಳು ದೆಹಲಿ, ಕೊಲ್ಕತ್ತಾ, ನೊಯ್ಡಾ, ಮುಂಬೈ, ಚೆನ್ನೈ, ಹೈದರಾಬಾದ್, ಬೆಂಗಳೂರು (ನಂ. 508, ಪ್ರೆಸ್ಟೀಜ್ ಸೆಂಟರ್ ಪಾಯಿಂಟ್ ಕನ್ನಿಂಗ್ಹ್ಯಾಂ ರಸ್ತೆ), ಅಹ್ಮದಾಬಾದ್, ರಾಂಚಿ, ಲಕ್ನೋ ಮತ್ತು ಭುವನೇಶ್ವರಗಳಲ್ಲಿವೆ.
ಪೇಜಾವರರು ಮತ್ತು ನೀರಾ ಸೇರಿ ದುಡ್ಡು ಮಾಡಲು ಕೆಲವು ಹೊಸ ದಾರಿಗಳನ್ನು ಹುಡುಕಿಕೊಂಡರು. ವೇದ, ಸಂಸ್ಕೃತ, ಆಯುವರ್ೆದ ಇತ್ಯಾದಿಗಳಿಗೂ ಸಾಕಷ್ಟು ಡಿಮ್ಯಾಂಡ್ ಇದೆಯಾದ್ದರಿಂದ ಧರ್ಮಕಾರ್ಯ ಮಾಡಿದ ಪುಣ್ಯವೂ ಬಂತು. ತಿಜೋರಿಯೂ ತುಂಬಿತು ಎಂದುಕೊಂಡು ಇದೇ ವಿಚಾರದ ಹೊಸ ಶಿಕ್ಷಣ ಸಂಸ್ಥೆಗಳನ್ನು ತೆಗೆಯಲು ಹೊರಟರು.
ಅದರಂತೆ ದೇಶದ್ರೋಹಿ ನೀರಾಳ ಜೊತೆ ಪೇಜಾವರರು ಶಿವಮೊಗ್ಗದಲ್ಲೊಂದು ಆಸ್ಪತ್ರೆ ಕಟ್ಟಲು ಹೊರಟಿದ್ದಾರೆ. ಶಿವಮೊಗ್ಗ ಸಾಗರ ರಸ್ತೆಯಲ್ಲಿ ತಲೆ ಎತ್ತಲಿರುವ ಆಸ್ಪತ್ರೆಗೆ ನೀರಾ ಭಾರಿ ಬಂಡವಾಳ ಹಾಕುತ್ತಿದ್ದಾಳೆ.
ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ (SUDA) ಮೂಲಕ ಸಾಗರ ರಸ್ತೆಯಲ್ಲಿ ಒಂದೆರಡು ಎಕರೆ ಜಮೀನಿನ ಮಂಜೂರಾತಿಗೂ ಈಗಾಗಲೇ ಪೇಜಾವರರು ಅಜರ್ಿ ಹಾಕಿದ್ದಾರೆ.
ಇದಿಷ್ಟೆ ಅಲ್ಲದೆ ಉತ್ತರ ಕನ್ನಡದ ಸಿದ್ದಾಪುರ ಬಳಿ ಇನ್ನೊಂದು ಆಯುವರ್ೆದಿಕ್ ಕಾಲೇಜು ಹಾಗೂ ಆಸ್ಪತ್ರೆ ಅಂಗಡಿ ತೆರೆಯಲು ಪೇಜಾವರ-ನೀರಾ ಹೊರಟಿದ್ದಾರೆ. ಇವೆಲ್ಲ ಸುದೇಶ ಟ್ರಸ್ಟ್, ಶ್ರೀರಾಮ ವಿಠಲ ಟ್ರಸ್ಟ್ ಎಂಬಿತ್ಯಾದಿ ಹೆಸರುಗಳಲ್ಲಿ ತಲೆ ಎತ್ತಿದರೂ ಇದೆಲ್ಲವೂ ನೀರಾ ಬೇರೆ ಬೇರೆ ಡೀಲುಗಳಲ್ಲಿ ಕದ್ದ ಹಣವೇ ಆಗಿದೆ.
ಅಡ್ವಾಣಿ-ವಾಜಪೇಯಿ ಸಾಚಾ ಅಲ್ಲ.
ಇಂಡಿಯಾ ದೇಶದ ಅತ್ಯಂತ ದೊಡ್ಡ ವಂಚನೆಯ ಹಗರಣದಲ್ಲಿ ಸಿಕ್ಕಿ ಬಿದ್ದಿರುವ ನೀರಾ ರಾಡಿಯಾಗೆ ಮಹಾನ್ ದೇಶಭಕ್ತರಂತೆ ನಟಿಸುವ ಅಡ್ವಾಣಿ, ವಾಜಪೇಯಿಗಳೆಲ್ಲಾ ಗೊತ್ತು. ಮಹಾನ್ ರಾಷ್ಟ್ರ ನಿಮರ್ಾಣಕ್ಕೆ ಟೊಂಕಕಟ್ಟಿ ನಿಂತಂತೆ ಪೋಜು ಕೊಡುವ ಟಾಟಾ, ಅಂಬಾನಿಗಳೂ ಗೊತ್ತು.
ಅದಿಷ್ಟೆ ಅಲ್ಲ
ಮಹಾನ್ ದೈವಭಕ್ತರೂ, ಹಿಂದೂ ಧರ್ಮದ ರಕ್ಷಕರಂತೆ ಓಡಾಡುತ್ತಿರುವ ಪೇಜಾವರರೂ ಗೊತ್ತು.
ಇದು ಬರೀ ಗೊತ್ತಿರುವ ಸಂಗತಿಯಾಗಿದಿದ್ದರೆ, ಅಕಸ್ಮಾತ್ ಸಭೆ ಸಮಾರಂಭದಲ್ಲಿ ಸಿಕ್ಕು ಒಂದು ಫೋಟೋ ತೆಗೆಸಿಕೊಂಡ ಸನ್ನಿವೇಶವಾಗಿದ್ದರೆ ನಿರ್ಲಕ್ಷಿಸಬಹುದಾಗಿತ್ತು.
ಆದರೆ
ಪೇಜಾವರ ಸ್ವಾಮಿ ಈ ಕಳ್ಳಿಯ ಜೊತೆ ಹಣಕಾಸಿನ ವ್ಯವಹಾರ ಇಟ್ಟುಕೊಂಡಿದ್ದಾರೆ. ಅವಳ ಸುದೇಶ್ ಟ್ರಸ್ಟಿನ ಗೌರವ ಪೋಷಕರಾಗಿದ್ದಾರೆ.
ನೀರಾಳಿಂದ ತಮ್ಮ ಕೃಷ್ಣ ದೇವಸ್ಥಾನದ ನಿಮರ್ಾಣಕ್ಕೆ ಹಣ ತೆಗೆದುಕೊಂಡಿದ್ದಾರೆ. ಜಂಟಿ ಬ್ಯುಸಿನೆಸ್ಗೆ ಕೈಹಾಕಿದ್ದಾರೆ.
ನೀರಾ ಅಪರಾಧಿಯಾದರೆ ಪೇಜಾವರರೂ ಅಪರಾಧಿಯಲ್ಲವೇ? ಇದಕ್ಕೆ ಪೇಜಾವರರು ಉತ್ತರಿಸಲಿ.

ಪಾರ್ವತೀಶ

No comments:

Post a Comment