January 1, 2011

ಜಿಲ್ಲಾ ಪಂಚಾತಿ ಸಿಸ್ಟಮ್ಮು ಟೋಟಲಿ ಕ್ವಲ್ಯಾಪ್ಸಾಗಿದೆ ದ್ವಡಪ್ಪ!

ಒಂದು ರವುಂಡ್ ಕ್ಯಾನ್ವಾಸ್ ಮುಗಿಸಿಕೊಂಡು ಬಂದ ಜುಮ್ಮಿ ಸುಸ್ತಾದವಳಂತೆ,
``ಅಸ್ ನಮ್ಮಪ್ಪ ಹೋಗತ್ತಗೆ. ಸಾಕಾಗೋಯ್ತು ಕಣ ಮಾವ" ಎಂದಳು.
``ಯಾವ್ಯಾವೂರಿಗೋಗಿ ಬಂದ್ಯೆ?" ಎಂದ ಕಾಳಮಾವ.
``ಸಂತೆನಳ್ಳಿ, ಮಾಗಳ್ಳಿ, ಚಟ್ಟೆನಳ್ಳಿ, ಹಡೆನಳ್ಳಿ ಇಲ್ಯಲ್ಲ ಸುತ್ತಿ ಬಂದೆ."
``ಅಲ್ಯಲ್ಲ ಯಂಗದೇ?"
``ಏನೂ ಹೇಳಕ್ಕೆ ಬರದಿಲ್ಲ ಕಣಮಾವ. ಓಟು ಕೇಳಕ್ಕೆ ನಾಚಿಗಾಯ್ತದೆ."
``ಅದ್ಯಾಕ್ ನಾಚಿಗಾದತ್ಲೆ? ನೀನೇನು ಕಳ್ಳತನ ಮಾಡಿದ್ದಿಯಾ?"
``ಓಟು ಕೊಡೋರಿಗೆ ಅಂಗೆ ಕಾಣ್ತಿವಿ ಕಣಮಾವ. ಮುಂದೆ ಕಳ್ಳತನಕೆ ದಾರಿ ಮಾಡಿಕಳಕ್ಕೆ ಬಂದಿರೋರಂಗೆ ಕಾಣ್ತಿದ್ದೊ" ಎಂದಳು ಜುಮ್ಮಿ.
``ಅದ್ಯಾಕಂಗಾಗ್ಯದೆ ಗೊತ್ತೆ ಮಾವ. ಈ ಹಿಂದಿನ ಯಲಕ್ಷನ್ನಲಿ ಇಂಗೆ ತಿರುಗಿದ್ದೊ. ಆಗ ಗೆದ್ದ ಮುಂಡೆ ಮಗ ಏನು ಮಾಡಿದ ಅಂದ್ರೇ, ನಾವು ಹೋಗಿ ಓಟು ಕೇಳಿದೂರಿಗೆ ಏನೂ ಮಾಡಿಲ್ಲ. ಆದ್ರುವೆ ರಸ್ತೆ ಮಾಡಿದ್ದಿನಿ ಅಂತ ಬಿಲ್ ತಗಂಡವುನೆ. ಕ್ಯರೆ ಹೂಳು ತಗದೆ ಅಂತ ಬಿಲ್ ತಗಂಡವುನೆ. ಏನಿಲ್ಲ ಅಂದ್ರೂ ನಮ್ಮ ಕಣ್ಣಿಗೆ ಕಾಣಂಗೆ ಐವತ್ತು ಲಕ್ಷ ರೂಪಾಯಿ ಪಡಕಂಡು, ಕಾರ್ ತಕಂಡು, ಜುಮ್ಮಂತ ತಿರುಗಾಡ್ತ ಅವುನೆ. ಅಂಥೋನ್ನ ಗೆಲ್ಲಿಸಿ ತಿರಗ ಓಟು ಕೊಡಿ ಅಂತ ಹೋದ್ರೆ ಜನ ನಮಿಗೆ ಕೇರ್ ಮಾಡ್ಯರೆ?" ಎಂದ ಉಗ್ರಿ.
``ಅಂಗರೆ ಜಿಲ್ಲಾ ಪಂಚಾಯ್ತಿ ಮೆಂಬ್ರು ಆಟೊಂತರ ದುಡ್ಡು ವಡದ್ನೆ."
``ಊ ಕಣ ಮಾವ. ಆಡಗಲೇ ಹ್ವಡದ, ಗ್ರಾಂಡಾಗಿ ಮಗಳ ಮದುವೆ ಮಾಡಿದ, ಬೇಕಾದಂಗೆ ಆಸ್ತಿ ಮಾಡಿದ, ಇವತ್ತು ಯಾರು ಗೆದ್ರೇನು ಯಾರು ಸೋತ್ರೇನು ಅಂತ ಮನೆ ವಳಗಡೆ ಕುತಗಂಡು, ಬ್ರಾಂದಿ ಕುಡಕಂಡು, ಬಾದಾಮಿಕಾಳ ಬಾಯಿಗ್ಯಸಗತ್ತ ಅವುನೆ" ಎಂದು ಉಗ್ರಿ ಹೇಳಿದ ಕೂಡಲೆ ತೂಗುತ್ತಿದ್ದ ತಲೆಯನ್ನು ಹಠಾತ್ತ್ತನೆ ಎತ್ತಿದ ವಾಟಿಸ್ಸೆ, ತೂಗಿದ ಮಾತಿನಲ್ಲಿ,
``ಜಿಲ್ಲಾ ಪಂಚಾಯ್ತಿ ವ್ಯವಸ್ಥೆ ಟೋಟಲ್ಲಿ ಕ್ವಲಾಪ್ಸಾಗ್ಯದೆ ದ್ವಡಪ್ಪ" ಎಂದ.
``ಮತ್ತೆ ಅಂತ ಯವಸ್ಥೆ ಯಾಕ್ ತಂದ ನಜೀರ್ ಸಾಬಿ?"
``ಅವುನ ತಂದಿದ್ದು ಅವುನ ಪುಸ್ತಗದಲ್ಲೇ ಉಳಕಂಡದೆ. ಅದೇ ಬ್ಯಾರೆ, ವ್ಯವಸ್ಥೆಯೇ ಬ್ಯಾರೆ ಆಗ್ಯದೆ ದ್ವಡಪ್ಪ. ಪ್ರತಿಯೊಬ್ಬ ಜಿಲ್ಲಾ ಪಂಚಾಯ್ತಿ ಮೆಂಬ್ರೂ ಇವತ್ತು ಕಾಂಟ್ರಾಕ್ಟ್ ಮಾಡುಸ್ತ ಅವುನೆ. ಪ್ರೊಫೆಸರ್ ನಂಜುಂಡಸ್ವಾಮಿ ಬೆಳೆಸಿರೊ ಲೀಡ್ರುಗಳು ಜಿಲ್ಲಾ ಪಂಚಾಯ್ತಿ ಮೆಂಬ್ರಾಗಿ ಯಂತ ಕ್ಯಲಸ ಮಾಡ್ಯವುರೆ ಗೊತ್ತೆ?"
``ಏನು ಮಾಡಿದ್ದರೂ?"
``ಆಗದೆಯಿರೊ ಕ್ಯಲಸಕೆ ಬಿಲ್ಲು ಮಾಡಿಕಂಡವುರೆ. ಅದ ದಕ್ಕಿಸಿಗಳಕ್ಕೆ ಹೋಗಿ ಬಿಜೆಪಿ ಸೇರಿಕಂಡವುರೆ. ಇದಕೇನೇಳ್ತೀ?"
``ನೋಡು ಮತ್ತೆ, ಇನ್ಯಂಥಾ ಕಳ್ಳನಿಗುಟ್ಟಿದೋರವುರು."
``ಇವುರು ಕಳ್ರಿಗೇನು ಹುಟ್ಟಿಲ್ಲ ದ್ವಡಪ್ಪ. ಇವುರೆ ಕಳ್ರಾಗ್ಯವುರೆ. ಅದ್ಕೆ ಈ ಜಿಲ್ಲಾ ಪಂಚಾಯ್ತಿ ಯಲಕ್ಷನಿಗೆ ಎಮ್ಮೆಲ್ಲೆ ಯಲಕ್ಷನ್ ಖದರ್ ಬಂದದೆ. ಆದ್ರಿಂದ ಇಟೀಸ್ ಟೋಟಲ್ಲಿ ಕ್ವಲಾಪ್ಸ. ಇಂತ ಸಿಸ್ಟಂಗೆ ಓಟು ಕೇಳಕ್ಕೆ ನನಿಗೇ ನಾಚಿಕೆ ಆಗ್ತದೆ. ಅದ್ಕೆ ನಾನು ಮನಿಂದ ಎಲ್ಲೂ ಹೋಗಿಲ್ಲ. ಜುಮ್ಮಕ್ಕನಿಗೂ ಹೋಗಬ್ಯಾಡ ಅಂತ ಹೇಳಿದ್ದಿನಿ ದ್ವಡಪ್ಪ."
``ಅಂಗಂದ್ರಾದತ್ಲ? ನೀರಿಗೆ ಬಿದ್ದ ಮ್ಯಾಲೆ ಈಜಲೇ ಬೇಕಪ್ಪ."
``ಈಜಬೇಕಾದ್ರೆ ಯನಜರ್ಿ ಬೇಕು ದ್ವಡಪ್ಪ. ನಾವು ಬರಿಕೈಲಿ ಓಟು ಕೇಳಕ್ಕೆ  ಆಗದಿಲ್ಲ. ಈ ಯಲಕ್ಷನ್ನಲ್ಲಿ  ಪ್ರತಿ ಕಾರ್ಯಕರ್ತನೂ ಕ್ಯಾನುವಾಸು ಮುಗಿಸಿಕೊಂಡು ಬಂದು ಯಣ್ಣೆ ವಡದು ಮನಿಕತ್ತನೆ. ಅದೇ ಓಟು ಮಾಡೋನು ಸುಮ್ಮನೆ ಮನಿಕಳಕ್ಕಾಯ್ತದ, ನೀನೆ ಹೇಳು?"
``ಅಂಗರವುನೂ ಕುಡಿಬೇಕು ಅನ್ನು."
``ಊ ಮತ್ತೆ. ವ್ಯವಸ್ಥೆ ಹಂಡ್ರೆಡ್ ಪರಸೆಂಟ್ ಕಟ್ಟಿರೋದ್ರಿಂದ ಕ್ಯಾನುವಾಸ್ ಮಾಡೊರು, ಓಟು ಮಾಡೋರು, ಕ್ಯಾಂಡಿಡೇಟ್ ಯಲ್ರು ಕುಡಿಯದು ಧರ್ಮ."
``ಬಾಲ ಕಳಕಂಡ ನರಿ ನರಿಕುಲಕೆ ಬುದ್ಧಿಹೇಳಿತ್ತಂತೆ, ಅಂಗಾಯ್ತು ನಿನ್ನ ಕತೆ."
``ದ್ವಡಪ್ಪ, ನಾನು ಹಾಸ್ಯ ಮಾಡ್ತಾಯಿಲ್ಲ. ಸ್ವಲುಪ ನೀನೆ ಯೇಚನೆ ಮಾಡು. ಕ್ಯಾನುವಸು ಮಾಡೋರು ಕುಡಿಯದೆ ಆದ್ರೆ, ಓಟು ಮಾಡೋರು ಕುಡಿಬೇಕು ಅಂತರೆ."
``ಯಲ್ಲ ಅಂಗನ್ನಕೋದರ್ಲ. ಈಗ ನನಿಗೆ ಕುಡುಸ್ಲಿ ನೋಡನ."
``ಒಂದೂರಿಗೆ ನಿನ್ನಂಥೋರು ಹತ್ತು ಜನ ಸಿಗಬವುದು ಅಷ್ಟೆಯ. ಇನ್ನ್ಯಲ್ಲ ಜನಗಳು ನಾವು ಹೋದ ಕೂಡ್ಳೆ ಜೇಬು ನೋಡ್ತರೆ ದ್ವಡಪ್ಪ. ಆಗ ನನಿಗೇ ಒಂಥರಾ ಆಯ್ತದೆ."
``ಕೇಳಿದೋರಿಗ್ಯಲ್ಲ ಕೊಟ್ಟ ಕೈಯಿ ನೋಡು ನಿಂದು, ಬೇಜಾರಾಗಬೇಕಾದ್ದೆ ಬುಡು" ಎಂದ ಉಗ್ರಿ.
``ಮಿಸ್ಟರ್ ಉಗ್ರಿ, ನಾನು ಕೈಯಿಂದ ಕ್ಯಾಶ್ ಕೊಡದೇಯಿರಬವುದು. ಆದ್ರೆ ಡ್ರಿಂಕ್ಸ್ ಕೊಟ್ಟಿದ್ದಿನಿ. ಅದೇನು ಬಿಟ್ಟಿ ಬಂದತೇ? ಅದುಕೂ ದುಡ್ಡು ಕೊಡಬೇಕು ಗೊತ್ತಾ."
``ದುಡ್ಡು ಕೊಡಬೇಕು ಸರಿ. ನಿನ್ನ ಕೈಯಿಂದ ಕೊಟ್ಟಿಲ್ಲವಲ್ಲ ಹೇಳು."
``ಇದೇನೊ ಉಗ್ರಿ ಹಿಂಗಂತೀ. ವಾಟೆಸೇಮ್. ನಮಿಗೆ ಕ್ಯಾಂಡಿಡೇಟ್ ಕಾಸು ಕೊಟ್ಟಿರತನೆ ನಿಜ. ಅದವುನಿಗೆಲ್ಲಿಂದ ಬಂತು? ಅವುನೇನು ಕೂಲಿ ಮಾಡಿದ್ದನೊ, ಕ್ವಟ್ಣ ಕುಟ್ಟಿ ಸಂಪಾದ್ನೆ ಮಾಡಿದ್ದನೊ ಹೇಳು. ಅವುನ ದುಡ್ಡೂ ಕೂಡ ಸಾರ್ವಜನಿಕರ ದುಡ್ಡು. ಅಂದ್ರೆ ನಮ್ಮ ದುಡ್ಡು. ನಾನೊಂದು ಸಿಗರೇಟ್ ಸೇದಿದ್ರೆ ಒಂದ್ರುಪಾಯಿ ಟ್ಯಾಕ್ಸು ಸಕರ್ಾರದ ಖಜಾನೆವಳಿಕೆ ಹೋಗಿ ಠಣಾರಂತ ಬೀಳ್ತದೆ. ಅದೇ ತರ ನನ್ನ ಇಡೀ ಜೀವನದ ತೆರಿಗೆ ಹಣದಿಂದ ಸರಕಾರ ನ್ಯಡಿತದೆ ಗೊತ್ತೆ?"
``ಆ ಪುಲಾರ ಇಲರ್ಿ, ನಡಿಲ ಕ್ಯಾನುವಾಸ್ ಮಾಡನ."
``ನೀನು ಬೇಕಾದ್ರೆ ಹೋಗಕ್ಕ. ನಾನೊಂದಿಷ್ಟು ರೆಸ್ಟು ತಗೊತ್ತಿನಿ. ಯಾಕಂದ್ರೆ ಏನೊ ಒಂಥರಾ ಫೀಲಾಗ್ಯದೆ."
``ಅದ್ಯಂತ ಪೀಲಾಗಿದ್ದತ್ಲ ನಿಂಗೆ? ಯಾವಾಗ್ಲು ಹುಯ್ಕಂಡು ನಿನ್ನತ್ರಕೆ ಬಂದ್ರೆ ಕ್ವಳತೋಗಿರೊ ಬಾರೆಹಣ್ಣು ಮೂಸಿದಂಗಾಯ್ತದೆ."
``ಅದ್ಯಾಕಂತ ವಾಸನೆ ಬತ್ತದೆ ಗೊತ್ತೇನೆ? ಇವು ಕುಡುದುಬುಟ್ಟು ಅದ್ಯಂತದೊ ಪೀಸು ಪರಾಗನೂ ಹಾಯ್ಕತ್ತವೆ, ಅದ್ಕೆ ಅಂತ ವಾಸನೆ."
``ನಾನೇನೊ ಡೀಪಾಗಿ ಯೋಚನೆ ಮಾಡ್ತಾಯಿರ ಬೇಕಾದ್ರೆ ನೀವು ಡ್ರಿಂಕ್ ಮಾಡಿದೋರ ಸ್ಮೆಲ್ ಬಗ್ಗೆ ಮಾತಾಡ್ತಿರೇನೊ. ಸೈಲೆನ್ಸ್ ಪ್ಲೀಸ್."
``ಹೇಳಪ್ಪ ಅದೇನು?"
``ನಾನಾಗ್ಲೆ ಏನೇಳಿದನಪ್ಪಾ ಅಂದ್ರೇ, ಈ ಜಿಲ್ಲಾ ಪಂಚಾಯ್ತಿ ಸಿಸ್ಟಮ್ಮು ಕ್ವಲಾಪ್ಸಾಗ್ಯದೆ. ಪ್ರತಿ ಹೋಬಳಿನೂ ಒಬ್ಬ ಹೊಸ ಕಂಟ್ರಾಕ್ಟರ್ ತಯಾರು ಮಾಡ್ತೇವರತು ಇನ್ನೇನು ಮಾಡಿಲ್ಲ. ಇವುರು ಚುನಾವಣೆಗೆ ಆಗೊ ಖಚರ್ು ನ್ಯನಿಸಿಗಂಡ್ರೆ ಭಯ ಆಯ್ತದೆ. ಒಂದೋಬಳಿಗೆ ಎಷ್ಟು ಬೂತು ಬರ್ತವೆ, ಅವುಕ್ಯಲ್ಲ ಸಿಬ್ಬಂದಿ, ಆ ಸಿಬ್ಬಂದಿಗೆ ಸಂಬಳ, ಪೊಲೀಸ್ನೋರಿಗೆ ಸಂಬಳ, ಚುನಾವಣೆ ಸಾಮಗ್ರಿ ಖಚರ್ು, ಅಂದ್ರೆ ಗುಂಡುಪಿನ್ನಿಂದ ಹಿಡದು ಇಂಕ್ ಪ್ಯಾಡಗಂಟ ವಸದಾಗೇ ಪರ್ಚೇಸ್ ಮಾಡಿ, ಒಂಟು ಡಬಲ್ ಬಿಲ್ಲಾಕಿರತರೆ. ಅದನ್ನ್ಯಲ್ಲ ಲ್ಯಕ್ಕ ಹಾಕಿ ಟೋಟ್ಳು ಮಾಡಿದ್ರೆ, ಒಂದು ಹೋಬಳಿಗೇ ಲಕ್ಷಾಂತರ್ರುಪಾಯಿ ಖಚರ್ಾಗಿರತದೆ. ಇಷ್ಟ್ಯಲ್ಲ ಖಚರ್ಿನಿಂದ ನಾವು ಪಡಿಯೋ ರಿಜಲ್ಟೇನಪ್ಪ ಅಂದ್ರೆ, ಒಬ್ಬ ಶತಮೂರ್ಖ, ಕಳ್ಳ, ಭ್ರಷ್ಟ, ಯಂಥೋನೊ ವಬ್ಬ ರ್ಯಾಸ್ಕಲ್ನ ಆರುಸ್ತಿವಿ. ಅವುನು ಬಂದು ಏನು ಮಾಡ್ತನಪ್ಪ ಅಂದ್ರೇ, ಆಗದೆಯಿರೊ ಸೇತುವೆ, ರಸ್ತೆಗೆ ಬಿಲ್ಲು ಮಾಡಿಕತ್ತನೆ. ಸೈಕಲ್ ಬಿಸಾಕಿ ಕಾರು ತಗತ್ತನೆ. ದೊಡ್ಡದೊಡ್ಡ ಯೋಜನೆ ತಂದು ಬಿಲ್ಲು ಮಾಡಿಕಂಡು, ಮಜ ಮಾಡ್ತನೇ. ಇದೇನು ಸುಳ್ಳಲ್ಲ. ಈ ಹಿಂದೆ ನಾವು ಆರಿಸಿ ಕಳಿಸಿದ್ದ ಕಳ್ಳನ್ನ ನೋಡೇ ಹೇಳ್ತಯಿದ್ದಿನಿ. ಆದ್ರಿಂದ ಈ ಜಿಲ್ಲಾ ಪಂಚಾತಿ ಮೀಟಿಂಗ್ ನೋಡಿದ್ರೆ, ಕಂಟ್ರಾಕ್ಟರ್ ಮೀಟಿಂಗ್ ನೋಡಿದಂಗಾಯ್ತದೆ. ಅದ್ಕೆ ನನಿಗೆ ಕ್ವಲಾಪ್ಸಾಗಿರೊ ಸಿಸ್ಟಂಮ್ಮಿಗೆ ಓಟು ಕೇಳಕ್ಕೆ ನಾಚಿಗಾಯ್ತದೆ. ನೀನೆ ಹೋಗಿ ಬಾರಕ್ಕ."
``ನಾವು ನಿಲ್ಲಿಸಿರೊ ಕ್ಯಾಂಡೇಟು ಅಂಥೋಳಲ್ಲ ಕಂಡ್ಳ. ಬಾರಿ ಓದಿಕಂಡವುಳಂತೆ. ಇಸುಗೂಲು ಯಡ್ಡ ಮೇಡಂಮ್ಮಾಗದು ಬುಟ್ಟು ಯಲಕ್ಷನ್ನಿಗೆ ಬಂದವುಳೆ. ವಳ್ಳೆ ಕ್ಯಲಸ ಮಾಡಸನ ಬಾರ್ಲ."
``ನಾನು ನಮ್ಮ ಕ್ಯಾಂಡೇಟ್ ಬಗ್ಗೆ ಹೇಳ್ಳಿಲ್ಲ ಕಣಕ್ಕ. ಟೋಟಲ್ಲಿ ಜಿಲ್ಲಾ ಪಂಚಾತಿ ಸಿಸ್ಟಂ ಬಗ್ಗೆ ಹೇಳಿದೆ. ನಿಮ್ಮ ಕ್ಯಾಂಡೇಟ್ ಸಮಸ್ಯೆ ಏನಂದ್ರೇ ಬರೀಕೈಲಿ ಓಟು ಕೇಳಿಕಂಡು ಕೈ ಮುಗೀತಾ ಹೋದ್ರೆ ಆಗದಿಲ್ಲ. ರಾತ್ರಿವೊತ್ತು ಒಂದಿಷ್ಟು ಅಂಡರ್ ಗ್ರೌಂಡ್ ವರಕನೂ ಮಾಡಬೇಕು ಕಣಕ್ಕ."
``ಯಲ್ಲಾ ಹಾಳಾಗೋಯ್ತು. ಮುಂದಕೆ ಇಂತ ಕ್ಯಾಂಡೇಟ್ ನಿಲ್ಲಿಸಿ, ಹಿಂಗೆ ಯಲಕ್ಸನ್ ಮಾಡಬೇಕು ಅಂತಿದ್ದೆ."
``ಅಂತಿದ್ದೆ ಸರಿ ಕಣಕ್ಕ. ಒಂದು ಸ್ವಲುಪ ನಾನು ಕೈ ಸಡ್ಳ ಮಾಡಿ ಕೆಲುವುರನ್ನಾದ್ರು ನೋಡಿಕಬೇಕಾಯ್ತದೆ. ನೋಡು, ಸೀರ ಚಿಗಪ್ಪನ್ನ ನಾವು ಸರಿಯಾಗಿ ನೋಡಿಕೊಳ್ಳಲಿಲ್ಲ. ಅವುನಾಗ್ಲೆ ದಳದಲ್ಲಿ ಕಾಣಿಸಿಗತ್ತಾ ಅವುನೆ. ಅದ್ಕೆ ನಾನು ಐಡೆಂಟಿಟಿ ಮಾಡೋ ಕಾರ್ಯಕರ್ತರಿಗಾರ ಒಂದಿಷ್ಟು ಸಪ್ಲೈ ಮಾಡಬೇಕು. ಇಲ್ಲ ಅಂದ್ರೆ ಸಪ್ಪೆ ಎಲಕ್ಷನ್ನಾಯ್ತದೆ ಕಣಕ್ಕ, ಸಪ್ಪೆ ಯಲಕ್ಷನ್ನಾಯ್ತದೆ."
``ಹೋಗ್ಲಿ ನಾನು ಕುಡುಸ್ತಿನಿ ನಡಿ."
``ಕ್ಯಾಂಡೇಟ್ ಕೊಟ್ಟ ದುಡ್ಡು ಮಡಿಕಂಡು ಏನಾಟ ಆಡ್ತಿಯಕ್ಕ!"



ಬಿ.ಚಂದ್ರೇಗೌಡ

No comments:

Post a Comment