January 1, 2011

ಉಪೇಂದ್ರನ ಸುತ್ತ ವಿಕೃತಿ

ಉಪೇಂದ್ರ ನಿದರ್ೇಶನದ ಸಿನಿಮಾ 'ಸೂಪರ್' ಕನರ್ಾಟಕದ ಥಿಯೇಟರ್ಗಳಲ್ಲಿ 25 ದಿನಗಳನ್ನು ಪೂರೈಸಿದೆ. ಇದು ಉಪೇಂದ್ರ ಬ್ರಾಂಡ್ನ ಮತ್ತೊಂದು ಟಿಪಿಕಲ್ ಸಿನಿಮಾ. 'ಎ' ಸಿನಿಮಾದಿಂದ ಶುರುವಾದ ಈ ಬ್ರಾಂಡ್ನಲ್ಲಿ ಜನರಿಗೇನೋ ಸಂದೇಶವನ್ನು ನೀಡುತ್ತಿದ್ದಾರೆ ಎಂಬ ಭ್ರಮೆಯನ್ನು ಮೂಡಿಸಲಾಗುತ್ತದೆ. `ಸೂಪರ್' ನಲ್ಲಂತೂ ಅದು ಧಾರಾಳವಾಗಿಯೇ ಇದೆ. ಇಂದು ನಡೆಯುತ್ತಿರುವ ಭ್ರಷ್ಟಾಚಾರವನ್ನು, ರಾಜಕಾರಣಿಗಳ ದುಷ್ಟ ಆಟಗಳನ್ನು ವ್ಯಂಗ್ಯ ಮಾಡುವ ಈ ಸಿನಿಮಾ ಪ್ರಧಾನವಾಗಿ ಟಾಗರ್ೆಟ್ ಮಾಡುವುದು ಸಾಮಾನ್ಯ ಜನರನ್ನು. ಮೇಲ್ನೋಟಕ್ಕೆ ಅದು ಜನಸಾಮಾನ್ಯರ ನಿಷ್ಕ್ರಿಯತೆಯನ್ನು ಲೇವಡಿ ಮಾಡಿ ಅವರನ್ನು ಅನ್ಯಾಯದ ವಿರುದ್ಧ ಹೋರಾಟ ಮಾಡುವಂತೆ ಪ್ರಚೋದಿಸುತ್ತದೆ ಎನ್ನಿಸುತ್ತದೆ. ಈತನದ್ದೇ ನಿದರ್ೇಶನದ 'ಆಪರೇಷನ್ ಅಂತ'ದಲ್ಲೂ ಇದರ ಸೂಚನೆಗಳಿವೆ.
ಆದರೆ ಈ ರೀತಿಯ ಸಿನಿಮಾಗಳಲ್ಲಿ ಒಂದು ಅಪಾಯವಿದೆ. ಏಕೆಂದರೆ ಇವು ವ್ಯವಸ್ಥೆಯ ಕೆಟ್ಟ ಅಂಶಗಳ ವಿರುದ್ಧ ಮಾತನಾಡುತ್ತಲೇ ಅದನ್ನು ಮತ್ತಷ್ಟು ಬಲಪಡಿಸುತ್ತವೆ. ಕೊಳೆತು ಹೋಗಿರುವ ವ್ಯವಸ್ಥೆ ಕುರಿತಂತೆ ಎರಡು ವಿಭಿನ್ನ ದೃಷ್ಟಿಕೋನದ ವಿಮಶರ್ೆಗಳಿರಲು ಸಾಧ್ಯ. ಒಂದು, ಜನರನ್ನು ಜಾಗೃತಿಗೊಳಿಸಿ ಸಾಮೂಹಿಕ ಕ್ರಿಯೆಗಳ ಮೂಲಕ ವ್ಯವಸ್ಥೆಯ ಬದಲಾವಣೆಗೆ ತೊಡಗುವಂತೆ ಮಾಡುವ ಉದ್ದೇಶದ್ದು. ಇನ್ನೊಂದು, ಸಮಾಜವನ್ನು ಬೆತ್ತಲುಗೊಳಿಸುವ ಹೆಸರಿನಲ್ಲಿ ಮತ್ತಷ್ಟು ಪ್ರತಿಗಾಮಿ ಪಯರ್ಾಯಗಳೆಡೆಗೆ ಕೊಂಡೊಯ್ಯುವುದು. ಇಲ್ಲಿ ಉಪೇಂದ್ರ ಮಾಡುತ್ತಿರುವುದು ಎರಡನೆಯದ್ದನ್ನು.
ವ್ಯವಸ್ಥೆ ಬದಲಾವಣೆಗೆ ಸಾಮೂಹಿಕ ಕಾಯರ್ಾಚರಣೆಗೆ ಇಳಿಯದ ಜನರು ಸಿನಿಕರಾಗಿ 'ಇಲ್ಲಿ ಕಮ್ಯುನಿಸಂ ಬರಬೇಕು, ಮಿಲಿಟರಿ ಆಡಳಿತ ಬರಬೇಕು, ಹಿಟ್ಲರ್ ಥರಾ ಆಡಳಿತ ನಡೆಸಬೇಕು' ಅಂತ ಹೇಳುತ್ತಿರುತ್ತಾರೆ. ಅಂಥವರಿಗೆ ಕಮ್ಯುನಿಸಮ್ಮೂ ಗೊತ್ತಿಲ್ಲ, ಹಿಟ್ಲರ್ ಕೂಡಾ ಗೊತ್ತಿಲ್ಲ. ಫ್ಯಾಸಿಸ್ಟ್ ಸವರ್ಾಧಿಕಾರವನ್ನೂ, ಜನಸಾಮಾನ್ಯರ ಬೃಹತ್ ಹೋರಾಟದಿಂದ ನಡೆಯುವ ಕಮ್ಯುನಿಸ್ಟ್ ಕ್ರಾಂತಿಗಳನ್ನೂ ಒಂದೇ ಎನ್ನುವ ರೀತಿಯಲ್ಲಿ ತಿಳಿಯುತ್ತಾರೆ. ಎರಡೂ ಸೈದ್ಧಾಂತಿಕವಾಗಿ, ಆಚರಣೆಯಲ್ಲಿ ಪರಸ್ಪರ ವಿರುದ್ಧದ ಧಾರೆಗಳು ಅಂತ ಅವರಿಗೆ ಗೊತ್ತಿರುವುದಿಲ್ಲ. ಇಂಥವರೇ ಗುಜರಾತ್ನಲ್ಲಿ ಮೋದಿ ಸಕತ್ ಆಗಿ ಆಡಳಿತ ನಡೆಸುತ್ತಿದ್ದಾನಂತೆ, ನಮ್ಮಲ್ಲಿಗೂ ಅಂಥವನೇ ಬೇಕು ಎಂದೂ ಹೇಳುತ್ತಾರೆ.
ಸಾವಿರಾರು ಮುಸ್ಲಿಮರ ನರಮೇಧ ನಡೆಸಿದ ಮೋದಿ ಅದು ಹೇಗೆ ಜನಪರ ಆಡಳಿತ ನೀಡಬಲ್ಲ ಎಂದು ಅವರು ಯೋಚಿಸುವ ಗೊಡವೆಗೇ ಹೋಗುವುದಿಲ್ಲ. ಹಿಟ್ಲರ್ ಎಂದರೆ ಬಲಪ್ರಯೋಗದಿಂದ ಶಿಸ್ತನ್ನು ತಂದ ಸವರ್ಾಧಿಕಾರಿ ಎಂಬ ತಿಳಿವಳಿಕೆಯ ಅವರುಗಳು, ಅವನು ಇತಿಹಾಸ ಕಂಡ ಅತ್ಯಂತ ದುಷ್ಟ ನರಹಂತಕ ಎನ್ನುವ ಮಾಹಿತಿಯನ್ನು ಗಮನಿಸುವುದಿಲ್ಲ; ಗಮನಿಸಿದರೂ ಅದು ಅವರಿಗೆ ಮುಖ್ಯವಾಗಿರುವುದಿಲ್ಲ. ಮೋದಿ, ಹಿಟ್ಲರ್ ಥರದವರು ಮೂಲಭೂತವಾಗಿ ಶೋಷಕರ, ಬಂಡವಾಳಶಾಹಿಗಳ ಪರವಾಗಿ ಆಡಳಿತ ನಡೆಸುವವರು ಎನ್ನುವ ವಾಸ್ತವವೂ ಬೇಕಾಗಿರುವುದಿಲ್ಲ.
ಏಕೆಂದರೆ ಎಲ್ಲಿಂದಲೋ ಅವತರಿಸುವ ಮಹಾಪುರುಷನೊಬ್ಬ ಬದಲಾವಣೆ ತರುವುದು ಅವರಿಗೆ ಬೇಕಾಗಿರುತ್ತದೆ. ಉಪೇಂದ್ರನ ಸಿನಿಮಾ ಜನರ ಈ ಧೋರಣೆಯನ್ನು ಲೇವಡಿ ಮಾಡುವ ರೀತಿ ಕಾಣುತ್ತದೆ. ಜನರು ಅನ್ಯಾಯದ ವಿರುದ್ಧ ರೊಚ್ಚಿಗೆದ್ದು ತಮ್ಮಂತೆ ತಾವೇ ಎಲ್ಲವನ್ನೂ ಬದಲಾಯಿಸಬೇಕು ಎಂಬಂತಹ ಕರೆಗಳನ್ನು ನೀಡಲಾಗುತ್ತದೆ. ಒಂದು ಹುಸಿ ಕ್ರಾಂತಿಕಾರಿ ಸೋಗು ಉಪೇಂದ್ರ ನಿದರ್ೇಶನದ ಇಂತಹ ಸಿನಿಮಾಗಳಲ್ಲಿ ಕಾಣುತ್ತದೆ. ಆದರೆ ಅದಕ್ಕಾಗಿ ವ್ಯವಸ್ಥೆಯ ಬಲಿಪಶುಗಳಾದ ಜನರನ್ನೇ ವಿಪರೀತ ಲೇವಡಿ ಮಾಡಿ ಬಯ್ಯಲಾಗುತ್ತದೆ. ಜೊತೆಗೆ ಬೀದಿಯಲ್ಲಿ ಕಸ ಚೆಲ್ಲುವ, ಗೋಡೆ ಬದಿಯಲ್ಲಿ ಉಚ್ಚೆ ಹೊಯ್ಯುವ ಜನರು ನೂರು ಎಕರೆ ಭೂಮಿ ಡೀನೋಟಿಫೈ ಮಾಡಿದ ಮುಖ್ಯಮಂತ್ರಿಯಷ್ಟೇ ಅಪರಾಧಿಗಳು ಎನ್ನುವ ರೀತಿಯಲ್ಲಿ ಚಿತ್ರಿಸಲಾಗುತ್ತದೆ. ಕೊನೆಗೂ ಜನರು ತಮ್ಮ ಸಾಮೂಹಿಕ ಜನಾಂದೋಲನದಿಂದ ಅಲ್ಲಿ ಬದಲಾವಣೆ ತರುವುದಿಲ್ಲ. ಬದಲಿಗೆ ಈ ಮಹಾಪುರುಷ (ಅದು ನಿದರ್ೇಶಕನ ರೂಪದಲ್ಲೋ, ನಾಯಕನ ರೂಪದಲ್ಲೋ ಇರುವ ಉಪೇಂದ್ರ ಎಂದು ಹೇಳಬೇಕಾಗಿಲ್ಲ) ಮಾಡುವ ಟ್ರಿಕ್ನಿಂದ ಬದಲಾವಣೆ ಬರುತ್ತದೆ. ಹೆಚ್ಚೆಂದರೆ ಇವನಿಂದ ಪ್ರಚೋದನೆಗೊಳಗಾದ ಉದ್ರಿಕ್ತ ಗುಂಪುಗಳು (ಮಾಬ್ಗಳು- ಭಜರಂಗದಳ, ಶಿವಸೇನೆ ಕಲ್ಪಿಸಿಕೊಳ್ಳಿ) ಬೀದಿಬೀದಿಯಲ್ಲಿ ಅವರಿವರಿಗೆ ಚಚ್ಚುತ್ತಾರೆ.
ಹಸೀ ಹಸೀ ಭಾಷಣಗಳಿಂದ, ಬೀದಿ ಬಡಿದಾಟಗಳಿಂದ, ದುಷ್ಟ ಮಾರ್ಗಗಳಿಂದ ಸಂಪಾದಿಸಿದ ಲಕ್ಷ ಕೋಟಿ ಹಣದಿಂದ ಮತ್ತು ಸೂಪರ್ ಟ್ರಿಕ್ಗಳಿಂದ ಉಪೇಂದ್ರನ ಸಿನಿಮಾದಲ್ಲಿ ಬದಲಾವಣೆ ಬರುತ್ತದೆ. `ಸೂಪರ್' ಸಿನಿಮಾದಲ್ಲೂ ಅಂತಿಮವಾಗಿ ಬದಲಾವಣೆ ಬರುವುದು ಇಂತಹುದೇ ರೀತಿಯಲ್ಲಿ. ಕೊಳಕು ಮಾರ್ಗಗಳಿಂದ ಸುಭಾಷ್ಚಂದ್ರ ಗಾಂಧಿ (ಉಪೇಂದ್ರ) ಅಧಿಕಾರಕ್ಕೆ ಬಂದು ಇಡೀ ರಾಜ್ಯವನ್ನು ಹರಾಜು ಹಾಕುತ್ತಾನೆ. ಆಗ ಜನರಿಗೆ ಸಾರ್ವಜನಿಕ ಆಸ್ತಿಯ ಬೆಲೆ ಅರಿವಾಗುತ್ತದೆ. ಒಂದೊಂದು ಊರಿನ ಪಾಕರ್ು, ರಸ್ತೆ, ಮೈದಾನಗಳನ್ನು ಜನರಿಗೆ ವಿಭಾಗ ಮಾಡಿ ಹಂಚಿಬಿಡಲಾಗುತ್ತದೆ. ಅಲ್ಲಿಂದ ಮುಂದೆ ಪ್ರತಿಯೊಬ್ಬರೂ ತಮ್ಮ ತಮ್ಮ ಖಾಸಗೀ ಆಸ್ತಿಯಾದ ತಮ್ಮ ಭಾಗದ ರಸ್ತೆ, ಪಾಕರ್ುಗಳನ್ನು ಅಚ್ಚುಕಟ್ಟು ಮಾಡಿ ಕೊಂಡುಬಿಡುತ್ತಾರೆ. ಆದರೆ ಮುಖ್ಯಮಂತ್ರಿ ಉಪೇಂದ್ರ ಮಾತ್ರ ಹಳ್ಳಿಯಲ್ಲಿ ಬೇಸಾಯ ಮಾಡಿಕೊಂಡು ಇದ್ದುಬಿಡುತ್ತಾನೆ. 20 ವರ್ಷಗಳಲ್ಲಿ ಕನರ್ಾಟಕ ಸಂಪದ್ಭರಿತ ದೇಶವಾಗಿಬಿಡುತ್ತದೆ. ವಿದೇಶೀಯರು ಇಲ್ಲಿ ಬಂದು ಕೂಲಿ ಕೆಲಸ ಮಾಡಲು ಶುರು ಮಾಡುತ್ತಾರೆ, ಭಿಕ್ಷುಕರಾಗಿ ದೇವಸ್ಥಾನಗಳ ಮುಂದೆ, ಬಸ್ಸ್ಟಾಂಡ್ಗಳಲ್ಲಿ ಕಾಣಸಿಗುತ್ತಾರೆ. ಕನರ್ಾಟಕ ಸಂಪದ್ಭರಿತವಾಗುವುದೇನೋ ಸರಿ, ಆದರೆ ಇದ್ದಕ್ಕಿದ್ದಂತೆ ಪಾಶ್ಚಾತ್ಯರು ಇಲ್ಲಿ ಭಿಕ್ಷುಕರಾಗುವುದು ಏಕೋ, ನಿದರ್ೇಶಕನಿಗೇ ಗೊತ್ತು.
ಸಮಾಜದಲ್ಲಿ ಆಗುತ್ತಿರುವ ಶೋಷಣೆಯು ಮೂಲ ಏನು ಎಂಬುದರ ಕುರಿತು ಉಪೇಂದ್ರನಿಗೆ ಕನಿಷ್ಠ ಜ್ಞಾನವಿದ್ದಂತೆ ಸಿನಿಮಾದಲ್ಲಿ ಎಲ್ಲೂ ತೋರುವುದಿಲ್ಲ. ಮಹಿಳೆಯರ ಮೇಲೆ ನಡೆಯು ತ್ತಿರುವ ತಾರತಮ್ಯ ಮತ್ತು ದಬ್ಬಾಳಿಕೆಯು ಈ ಸಮಾಜ ವ್ಯವಸ್ಥೆಯ ಅತ್ಯಂತ ಪ್ರಮುಖ ಶೋಷಣೆ ಗಳಲ್ಲೊಂದು ಎನ್ನುವುದನ್ನು ಆತ ಬಿಂಬಿಸುವುದು ಹೋಗಲಿ, ಆ ಶೋಷಣೆಗೆ ಮತ್ತಷ್ಟು ಮೊನಚನ್ನೂ, ಹೊಸ ಹೊಸ ಮಹಿಳಾ ವಿರೋಧಿ ವಾದಗಳನ್ನೂ ಇವನೇ ಹುಡುಕಿಕೊಡುತ್ತಾನೆ. ಯಾವ ಜನರು ಶೋಷಣೆಯ ಬಲಿಪಶುಗಳಾಗಿರುತ್ತಾರೋ, ಅವರು ಸುಮ್ಮನಿರುವುದೇ ಶೋಷಣೆಗೆ ಕಾರಣವೆಂದು ತೋರಿಸುವುದು `ಸೂಪರ್' ಸಿನಿಮಾದ ಒಂದು ಪ್ರಧಾನ ಎಳೆ. ಜನಸಾಮಾನ್ಯರು ಮಾಡುವ ಸಣ್ಣ ಪುಟ್ಟ ತಪ್ಪುಗಳೂ, ಶೋಷಕ ವರ್ಗಗಳು ಮಾಡುವ ಅಗಾಧ ಲೂಟಿಯೂ ಒಂದೇ ಪ್ರಮಾಣದ ತಪ್ಪು ಎಂದು ಬಿಂಬಿಸುವುದು ಈತನ ಹಿಂದಿನ ಸಿನಿಮಾ ಗಳಲ್ಲೂ ಕಂಡಿದೆ.
ಉಪೇಂದ್ರನ ಹಲವು ಸಿನಿಮಾಗಳಲ್ಲಿ ಹಿಂದೂ ತ್ವದ ವಾಸನೆ ಹೊಡೆಯುತ್ತದೆ. `ಸ್ವಸ್ತಿಕ್' ಸಿನಿಮಾದಲ್ಲಿ ಆತ ಸ್ಪಷ್ಟವಾಗಿ ಮುಸ್ಲಿಂ ವಿರೋಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಮಹಿಳೆಯರ ಬಗೆಗಿನ ಅವನ ನಿಲುವುಗಳೂ ಇದೇ ನೆಲೆಯಿಂದಲೇ ಬರುತ್ತಿರು ವುದು. ವಿಶೇಷವಾಗಿ ಮಾಡ್ ಡ್ರೆಸ್ ಮಾಡಿಕೊಳ್ಳುವ ಹೆಣ್ಣುಮಕ್ಕಳ ಬಗ್ಗೆ ಅವನ ಸಿನಿಮಾದಲ್ಲಿ ಕಾಣುವ ವರಾತಗಳು  ಕುಪ್ರಸಿದ್ಧವಾಗಿವೆ.  `ನಿಮ್ಮನ್ನು ಯಾರಾದರೂ ರೇಪ್ ಮಾಡಿದರೆ ಅದಕ್ಕೆ ಕಾರಣ ನೀವು ತೊಡುವ ಬಟ್ಟೆ. ನೀವು ಹಾಗೆ ಮಾಡುವುದ ರಿಂದಲೇ ಪ್ರಚೋದನೆಗೊಂಡು ಅತ್ಯಾಚಾರ ಇತ್ಯಾದಿ ಲೈಂಗಿಕ ಕಿರುಕುಳಗಳು ಸಂಭವಿಸುತ್ತವೆ' ಎಂಬುದು ಆತನ ಥಿಯರಿ. ವಾಸ್ತವದಲ್ಲಿ ಅತ್ಯಂತ ಹೆಚ್ಚು ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳಗಳು ಪರಿಚಿತರಿಂದ, ಹತ್ತಿರದ ಸಂಬಂಧಿಗಳಿಂದ ನಡೆಯುತ್ತದೆ ಎಂಬ ಅಂಕಿ-ಅಂಶ ಕಟ್ಟಿಕೊಂಡು ಆತನಿಗೆ ಆಗಬೇಕಾದ್ದೇನೂ ಇಲ್ಲ. ಉಪೇಂದ್ರ ತನ್ನ ಸಿನಿಮಾಗಳಲ್ಲಿ ಮಾಡುತ್ತಿರುವುದೇನು? ಹುಡುಗಿಯ ರನ್ನು ಅರೆನಗ್ನವಾಗಿ ಏಕೆ ತೋರಿಸುತ್ತಾನೆ? ಮಹಿಳೆ ಯರ ಮೇಲೆ ಮತ್ತಷ್ಟು ಅತ್ಯಾಚಾರಗಳು ನಡೆಯಲಿ ಎಂದೇ? ಅಲ್ಲ, ಸಿನಿಮಾ ಜಾಸ್ತಿ ಓಡಲಿ ಎಂದು.
ಅಸಲೀ ವಿಚಾರ ಇರುವುದೇ ಇಲ್ಲಿ. ಇಂತಹ ವಿಕೃತಿಗೊಂದು ಮಾಕರ್ೆಟ್ ಇದೆ. 'ಏನೇ ಆದರೂ ಈ ಸಮಾಜದಲ್ಲಿ ನಡೆಯುತ್ತಿರುವುದನ್ನೇ ತೋರಿಸುತ್ತಾನೆ', 'ಇಂಥದ್ದೂ ನಡೆಯುತ್ತಿದೆ ಅಲ್ಲವಾ? ಕೆಲವು ಹೆಣ್ಣುಮಕ್ಕಳು ಹೀಗೆಯೇ ಇದ್ದಾರಲ್ಲವಾ?' ಅಂತ ಹೇಳುವವರೂ ಇರುತ್ತಾರೆ. ವಿಕೃತಿಗೆ ಇರುವ ಮಾಕರ್ೆಟ್ಅನ್ನು ಬಳಸಿಕೊಳ್ಳುವುದು ಮತ್ತು ವಿಕೃತಿಗೆ ಹೊಸ ಮಾಕರ್ೆಟ್ಅನ್ನು ಸೃಷ್ಟಿಸುವುದು ಉಪೇಂದ್ರನ ಸಿನಿಮಾಗಳ ಫಲಿತಾಂಶವಾಗಿದೆ. ಇಂತಹುದೇ ಕೆಲಸವನ್ನು ಹಲವು ಪತ್ರಿಕೆಗಳು ಮತ್ತು ಟಿವಿ ಚಾನೆಲ್ಗಳು ಮಾಡಿಕೊಂಡು ಬಂದಿವೆ. ಈ ರೀತಿಯದೊಂದು ಮಾಕರ್ೆಟ್ಅನ್ನು ಬೆಳೆಸುವುದು, ನಂತರ 'ಏನು ಮಾಡುವುದು, ಜನ ಇಂಥದ್ದನ್ನೇ ಬಯಸುತ್ತಾರೆ. ಅವರು ಕೇಳಿದ್ದನ್ನು ನಾವು ಕೊಡುತ್ತೇವೆ' ಎನ್ನುವುದು ಇಂಥವರ ಚಾಳಿ.
ಇದರರ್ಥ ಇಂಥದನ್ನು ನೋಡುವ, ಓದುವ ಎಲ್ಲರೂ ಪ್ರಾರಂಭದಿಂದಲೇ ವಿಕೃತಿಯ ಆರಾಧಕರಾಗಿರುತ್ತಾರೆ ಅಂತ ಅಲ್ಲ. ತೌಡು ಕುಟ್ಟುವ ಹಳಸಲು ಸಿನಿಮಾಗಳನ್ನು, ಪತ್ರಿಕೆಗಳನ್ನು ಎಲ್ಲರೂ ಮಾಡುವ ಸಮಯದಲ್ಲಿ ಇವರೇನೋ ವಿಶಿಷ್ಟವಾದದ್ದನ್ನು ಹೇಳುತ್ತಾರೆ ಎಂಬ ಭ್ರಮೆಯನ್ನು ಮೊದಲು ಮೂಡಿಸುತ್ತಾರೆ. ಕಥೆಯನ್ನು ಹೇಳುವ ರೀತಿ, ಭಾಷೆಯನ್ನು ಬಳಸುವ ರೀತಿಯಲ್ಲಿನ ವಿಶಿಷ್ಟತೆಗಾಗಿ ಅದರ ಬಗ್ಗೆ ಕುತೂಹಲ ಮತ್ತು ಮೆಚ್ಚಿಗೆ ಮೂಡುತ್ತದೆ. ಆದರೆ ಒಳಹೂರಣ ಗಲೀಜಾದದ್ದು ಎನ್ನುವುದು ವಾಚಕ/ಪ್ರೇಕ್ಷಕ ಮಹಾಶಯರಿಗೆ ಸುಲಭವಾಗಿ ಗೊತ್ತಾಗುವುದಿಲ್ಲ. ಸಮಾಜ ಇದರಿಂದ ಮತ್ತಷ್ಟು ಗಲೀಜಾಗುತ್ತದೆಯೇ ಹೊರತು, ಯಾವ ರೀತಿಯಿಂದಲೂ ಸುಧಾರಿಸುವುದಿಲ್ಲ ಎನ್ನುವ ಕಾರಣಕ್ಕೆ ನಾವು ತಲೆಕೆಡಿಸಿಕೊಳ್ಳಬೇಕಿದೆ.

ಡಾ.ಎಚ್.ವಿ. ವಾಸು

No comments:

Post a Comment